
ಪ್ರೇಮ ಹೂವಂತೆ ಅರಳುವುದಿಲ್ಲ
ಅದು ಮಣ್ಣೊಳಗಿನ ಬೇರಿನಂತೆ..
ಚಿಗುರುವುದು ಒಲವೆಂಬ ಹನಿ ನೀರಿಗೆ
ಪ್ರೇಮ ಹಚ್ಚ ಹಸುರಾದ ಗದ್ದೆಯಂತಲ್ಲ
ಅದು ಬೆಂಕಿಯಲಿ ಬೆಂದ ಮಡಕೆ ಅನ್ನ
ಹಸಿದ ಒಡಲುಗಳಿಗಷ್ಟೇ ಮೃಷ್ಟಾನ್ನ
ಪ್ರೇಮ ನಭದ ನಕ್ಷತ್ರವಲ್ಲ
ಎದುರಿಗೆ ಸಿಗುವ ಮನುಜರ
ಕಣ್ಣೊಳಗಿನ ಹೊಳೆವ ಕಿಡಿ
ಪ್ರೇಮ ರೆಕ್ಕೆಯಿರುವ ಹಕ್ಕಿಯಂತಲ್ಲ
ಅದು ಗೂಡಿನೊಳಗಿನ ಮೊಟ್ಟೆಯಂತೆ
ಕಾಯುವುದು ಸ್ನೇಹದ ಕಾವಿಗೆ ತವಕದಲಿ…
ಎ. ಡೇವಿಡ್ ಕುಮಾರ್