ಒಮ್ಮೆ ಮುಲ್ಲಾ ತನ್ನ ಕೈತೋಟದಲ್ಲಿ ಎಲ್ಲಾ ರೀತಿಯ ಬೀಜಗಳನ್ನು ಹಾಕಿದನು. ಜೀಜಗಳು ಮೊಳಕೆಯೊಡೆದು ಸಸಿಗಳಾಗಲು ಉತ್ಸುಕತೆಯಿಂದ ಕಾಯುತ್ತಿದ್ದ. ಕೆಲವೊಂದು ಬೀಜಗಳು ಮೊಳಕೆಯೊಡೆದು ಸಸಿಗಳಾದವು. ಆದರೆ ಕೈತೋಟದಲ್ಲಿ ಹೆಚ್ಚಾಗಿ ಕಳೆಗಳೇ ಕಾಣಿಸಿಕೊಂಡವು. ಹತಾಶೆಯಿಂದ ಮುಲ್ಲಾ ಅರಮನೆ ತೋಟಗಾರರೊಂದಿಗೆ ಸಮಾಲೋಚಿಸಲು ಅರಮನೆಗೆ ತೆರಳಿದ. ತೋಟಗಾರಿಕೆಯಲ್ಲಿ ಪರಿಣಿತಿ ಪಡೆದ ತೋಟಗಾರನಿಗೆ ಮುಲ್ಲಾ ಹೇಳಿದ “ನಾನು ಕಳೆಗಳನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಿದೆ: ಕಳೆಗಳನ್ನು ಕಿತ್ತು ಬಿಸಾಡಿದೆ, ಹೆಚ್ಚು ಹೆಚ್ಚು ಹೂವಿನ ಬೀಜಗಳನ್ನು ನೆಟ್ಟೆ. ಆದರೆ ಕೈತೋಟದಲ್ಲಿ ಕಳೆಗಳು ಮಾತ್ರ ಕಡಿಮೆಯಾಗಲಿಲ್ಲ. ಏನು ಮಾಡೋದು? ಎಲ್ಲಿ ನೋಡಿದರೂ ಕಳೆಗಳೇ ಕಳೆಗಳು! ಅರಮನೆಯ ತೋಟಗಾರ ಸ್ವಲ್ಪ ಸಮಯದವರೆಗೆ ಮುಲ್ಲಾ ಹೇಳಿದನ್ನೆಲ್ಲಾ ಕೇಳಿ, ಒಂದು ಬುದ್ಧಿವಂತ ಸಲಹೆಕೊಟ್ಟ: “ನೀವು ಬಹು ಮುಖ್ಯವಾಗಿ ಮಾಡಬೇಕಿರುವುದು ಏನೆಂದರೆ ನೀವು ಕಳೆಗಳನ್ನು ಪ್ರೀತಿಸಲು ಕಲಿಯಬೇಕು”