ಒಬ್ಬ ವಿಜ್ಞಾನಿ ಕಾಲೇಜ್ ವಿದ್ಯಾರ್ಥಿಗಳಿಗೆ ಒಂದು ಉಪನ್ಯಾಸ ಕೊಡುತ್ತಿದ್ದರು. ಒಬ್ಬ ವಿದ್ಯಾರ್ಥಿ ನಿಂತು ವಿಜ್ಞಾನಿಗೆ “ವಿಶ್ವಾಸದ ಬಗ್ಗೆ ನಮಗೆ ನಿರ್ದಿಷ್ಟ ಪುರಾವೆಗಳ ಮೂಲಕ ತಿಳಿ ಹೇಳಬೇಕೆಂಬ ಬೇಡಿಕೆಯನಿಟ್ಟಾಗ, ವಿಜ್ಞಾನಿಗಳು ಒಂದು ಕಿತ್ತಳೆ ಹಣ್ಣು ತರುವಂತೆ ಹೇಳಿದರು. ತಂದ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸುಲಿದು ತಿಂದು ಅದೇ ವಿದ್ಯಾರ್ಥಿಗೆ ಕೇಳಿದರು,”ನಾನು ತಿಂದ ಕಿತ್ತಳೆ ಹಣ್ಣಿನ ರುಚಿ ಸಿಹಿಯೋ ಹುಳಿಯೋ?”. ಚಡಪಡಿಸಿದ ವಿದ್ಯಾರ್ಥಿ ‘ನೀವು ತಿಂದ ಕಿತ್ತಾಳೆಯ ರುಚಿ ಬಗ್ಗೆ ನಾನ್ಹೇಗೆ ಉತ್ತರಿಸಲಿ?’ ಎಂದು ಪ್ರಶ್ನಿಸಿದ. “ಹೌದು ಹೃದಯಕ್ಕೆ ಸಂಬಂಧಿಸಿದ ವಿಷಯಗಳು ವಿವರಣೆಗೆ ಸಿಗುವುದಿಲ್ಲ, ಅದು ನಿನ್ನ ಅನುಭವದಿಂದ ಮಾತ್ರ” ಉತ್ತರಿಸಿ ವಿಜ್ಞಾನಿ ತರಗತಿಯಿಂದ ಹೊರನಡೆದರು.
– ಇನ್ನಾ