
ಭಾರತವು ೧೯೫0 ರಲ್ಲಿ ಗಣರಾಜ್ಯವೆಂದು ಘೋಷಿಸಲ್ಪಟ್ಟಾಗ ಶ್ರೀ ಕುವೆಂಪು ರಚಿಸಿದ
‘ ಶ್ರೀ ಸಾಮಾನ್ಯರ ದೀಕ್ಷಾಗೀತೆ ‘ ಎಂಬ ಕವಿತೆ.
ಸ್ವಾತಂತ್ರ್ಯ,ಪ್ರಜಾಪ್ರಭುತ್ವ ಮತ್ತು ಗಣರಾಜ್ಯದ ವ್ಯವಸ್ಥೆಯನ್ನು ಎಷ್ಟು ಪ್ರೀತಿಯಿಂದ ಸ್ವಾಗತಿಸಿದ್ದಾರೆಂಬುದನ್ನು ಈ ಕೆಳಕಂಡ ಸಾಲುಗಳಲ್ಲಿ ನೋಡಬಹುದಾಗಿದೆ.
“ಕೊನೆಗೊಂಡಿತೋ ಓರೋರ್ವರ ಗರ್ವದ ಕಾಲ
ಇದು ಸರ್ವರ ಕಾಲ
ಸರ್ವೋದಯ ಸರ್ವೋದಯ
ಸರ್ವೋದಯ ಯುಗಮಂತ್ರ
ಸರ್ವೋದಯವೇ ಸ್ವಾತಂತ್ರ್ಯ ಶ್ರೀತಂತ್ರ
ಮೇಲಿಲ್ಲವೋ ಕೀಳಿಲ್ಲವೋ
ಸರ್ವ ಸಮಾನದ ರಾಜ್ಯ
ಅಧ್ಯಕ್ಷನೋ ಸೇನಾನಿಯೋ
ಕಮ್ಮಾರನೋ ಚಮ್ಮಾರನೋ
ಕಾಯಕವೆಲ್ಲವೂ ಪೂಜ್ಯ” !
ಎಲ್ಲರಿಗೂ ಗಣ ರಾಜ್ಯೋತ್ಸವದ ಶುಭಾಶಯಗಳು
- ದನಿ ಮಾಧ್ಯಮ ಮನೆ