
‘ದನಿ’ ಬಳಗದವರಿಗೆ ಹೊಸ ವರ್ಷದ ಶುಭಾಶಯಗಳು. ‘ದನಿ’ಯ ಬಗೆಗಿನ ಯೋಚನೆ ಬಂದಿದ್ದು 2016ರ ಕ್ರಿಸ್ಮಸ್ ಅಚರಣೆಯ ಆಸುಪಾಸಿನಲ್ಲಿ. ಕನ್ನಡ ಕಥೋಲಿಕ ಸಾಹಿತ್ಯ ಶ್ರೀಮಂತಗೊಳ್ಳಬೇಕು, ಅದಕ್ಕಾಗಿ ನಮ್ಮಲ್ಲಿ ಬರಹಗಾರರು ಹುಟ್ಟಿಕೊಳ್ಳಬೇಕು, ಬರಹಗಾರರು ಹುಟ್ಟಿಕೊಳ್ಳಬೇಕಾದರೆ, ಒಂದು ಭೂಮಿಕೆ ಅವರಿಗಾಗಿ ಸೃಷ್ಟಿಯಾಗಬೇಕು ಹೀಗೆ ಯೋಜನೆ ಏನೋ ಧನಾತ್ಮಕವಾಗಿತ್ತು, ಉದಾತ್ತವಾಗಿತ್ತು. ಆದರೆ ಇದು ಶ್ರಮದ ಹೋರಾಟ ಅನಿಸಿತು. ಏಕೆಂದರೆ ಬಳಗದಲ್ಲಿದ್ದ ಬೆರಳೆಣಿಕೆಯಷ್ಟು ಜನ, ಈ ಕ್ಷೇತ್ರಕ್ಕೆ ಹೊಸಬರಾಗಿದ್ದರು ಮತ್ತು ಅನನುಭವಿಗಳಾಗಿದ್ದರು. ಜತೆಗೆ ದನಿಗೆ ಯಾವ ಆಶ್ರಯದಾತರು ಕೂಡ ಇರಲಿಲ್ಲ. ಹೀಗೆ ಹಲವು ಯೋಚನೆಗಳಿಂದ ಅಸ್ಪಷ್ಟ ಮಡಿಲಲ್ಲೇ ದನಿಯು ಹುಟ್ಟಿಕೊಂಡಿತ್ತು. ಪ್ರಿಯರೆ, ದನಿಯು ಸುಮಾರು 50 ಸಂಚಿಕೆಗಳ ಹುಟ್ಟುಗಳನ್ನು ಕಂಡಿದೆ. ಇದೆಲವೂ ನಿಮ್ಮೆಲ್ಲರ ಹೊಣೆ, ಜವಾಬ್ದಾರಿ ಮತ್ತು ಶ್ರಮದಿಂದ ಅಗಿದ್ದು. ಇತ್ತಿಚೇಗಷ್ಟೆ, ದನಿ ಮಾಧ್ಯಮ ಮನೆಯನ್ನು ಕಟ್ಟಿಕೊಂಡು ‘ಕ್ರಿಸ್ತದನಿ’ ಎಂಬ ಮೊಬೈಲ್ ಆ್ಯಪ್ ಹೊರತಂದಿದ್ದೇವೆ. ಈ ವರ್ಷ ‘ದನಿ’ಯ (www.edani.in) ವೈಬ್ಸೈಟ್ ಕೂಡ ಆರಂಭವಾಗಿದೆ. ಹೌದು, ಸಣ್ಣದಾಗಿ ಹುಟ್ಟಿ ಬೆಳೆಯುತ್ತಿರುವ ದನಿಯ ಮೂಲ ಆಶಯ ಕನ್ನಡ ಕಥೋಲಿಕ ಸಾಹಿತ್ಯದ ಕೃಷಿ. ಜೊತೆಗೆ ವಿಶ್ವಪ್ರೇಮ ಪಸರಿಸುವ ಒಂದು ಸಣ್ಣ ಪ್ರಯತ್ನ. ಬನ್ನಿ ಸಾಧನೆಗಳ ಸಂಭ್ರಮಿಸೋಣ ಸಾಧಿಸಿಬೇಕಾದುದನ್ನು ಕಲೆಹಾಕಿ ಶ್ರಮಿಸೋಣ.
ಹೊಸ ವರ್ಷದ ಶುಭಾಶಯಗಳು.
@ದನಿ ಮಾಧ್ಯಮ ಮನೆ