ಕ್ರಿಸ್ಮಸ್

Advertisements
Share

ಕ್ರಿಸ್ತ ಈ ಜಗದ ಕತ್ತಲ ಕೋಣೆಯಲ್ಲಿ
ಎಂದೂ ಹುಟ್ಟಿದ ಸ್ಮರಣೆಯಲ್ಲ…
ನನ್ನ ನಿನ್ನ ಪ್ರತಿಯೊಬ್ಬರ ಬದುಕಿನಲ್ಲಿ
ಅಂದು, ಇಂದು ಎಂದೆಂದೂ
ಕ್ಷಣ ಕ್ಷಣಕ್ಕೂ ಸಂಭವಿಸುವ, ಆಚರಿಸುವ
ಸುಂದರ, ಸುಮಧುರ ಪ್ರೀತಿಯ ಹಬ್ಬ…

ಮನಸ್ಸು ಮಲೀನವಾಗಿ ಹೃದಯ ಭಾರವಾಗಿ
ಕಲ್ಮಶ ಭಾವಗಳಿಂದ ಜೀವನ ಕಸದ ತೊಟ್ಟಿಯಾದಾಗ
ಅವನೋ, ಇನ್ಯಾರೊ ಒಡ ಬಂದು
ಭಯಪಡಬೇಡ ಎಂದು ಧೈರ್ಯದ ಮಾತಾಡಿ
ನಮ್ಮ ಜೀವನದ ಕುಸುಮ ಅರಳಿಸಿದಾಗ ಕ್ರಿಸ್ಮಸ್….

ಕನಸು ನನಸಾಗದೆ, ಯೋಜನೆಗಳು ಕೈಗೂಡದೆ..
ಬದುಕು ಒಂದು ಕತ್ತಲ ಕೋಣೆಯಾಗಿ
ಆತೃಪ್ತಿಯ ಕೂಗು ಕೋಣೆಯ ಆವರಿಸಿದಾಗ
ನೀನೂ, ಅವನೋ ಒಂದು ಬತ್ತಿಯ ಹಿಡಿದು
ನನ್ನ ಬದುಕ ಕೋಣೆಯ ಪ್ರವೇಶಿಸಿ
ಬೆಳಗಿಸಿದ ಸ್ಮರಣೆಯೇ ಕ್ರಿಸ್ಮಸ್….

ಇಂತಹ ಅನುಭವಗಳ ಗಣಿ ತೋಡಿ
ನಮ್ಮ ಮನಸು ಲೆಕ್ಕ ಕೂಡಿ ಹಾಡಲಿ
ನಮ್ಮ ಅವನ ಸ್ನೇಹ ಹತ್ತಬೇಕಾದ
ಮುಂದಿನ ಮೆಟ್ಟಿಲುಗಳ ಲೆಕ್ಕ ಹಾಕಲಿ
ಮನಸು ಆರಮನೆಯಾಗಿ ಅವನ ಬರ ಮಾಡಲಿ

ಜೋವಿ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram