
ತನ್ನ ಬದುಕಿನ ಗೊತ್ತುಗುರಿಯನ್ನು ಅರಿಯಲು ಫ್ರಾನ್ಸಿಸ್ ಪವಿತ್ರಗ್ರಂಥದಲ್ಲಿ ತಡಕಾಡಿದ. ಆಧ್ಯಾತ್ಮಿಕ ಗುರುಗಳ ಹಾಗೂ ಸ್ನೇಹಿತರ ಬಳಿ ಚರ್ಚಿಸಿದ. ಜತೆಗೆ ಚರ್ಚ್ಗಳಲ್ಲಿ, ಗುಹೆಗಳಲ್ಲಿ ಸುದೀರ್ಘವಾಗಿ ಪ್ರಾರ್ಥಿಸಿದ. ಒಂದು ದಿನ ಹೀಗೆ ಅಸಿಸಿಯ ಹೊರವlಲಯದಲ್ಲಿ ಹಾದು ಹೋಗುತ್ತಿರುವಾಗ, ಪಕ್ಕದಲ್ಲಿದ್ದ ಒಂದು ಚಿಕ್ಕ ಚರ್ಚ್ನಿಂದ ಕ್ರಿಸ್ತನ ಕರೆ ಬಂತು: “ಹೋಗು ಹಾಳಾಗುತ್ತಿರುವ ನನ್ನ ಚರ್ಚನ್ನು ಮತ್ತೆ ಕಟ್ಟು”. ಆಗ ಫ್ರಾನ್ಸಿಸ್ ಕ್ರಿಸ್ತರ ಈ ಕರೆಯನ್ನು ಅಕ್ಷರಶಃ ವ್ಯಾಖ್ಯಾನಿಸಿ, ಅಸಿಸಿಯಲ್ಲಿದ್ದ ಚರ್ಚುಗಳ ಕಟ್ಟಡಗಳ ದುರಸ್ತಿ ಕೆಲಸ ಆರಂಭಿಸಿದ. ನಂತರ, ಜನರ ಹೃದಯಗಳಲ್ಲಿ ಚರ್ಚುಗಳನ್ನು ಪುನಃ ಸ್ಥಾಪಿಸಬೇಕೆಂಬ ಕರೆಯ ಒಳಾರ್ಥವನ್ನು ಅರಿತ ಫ್ರಾನ್ಸಿಸ್ ಕಾರ್ಯಪ್ರವೃತ್ತನಾದ..
“ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ
ಕೂಡಲಸಂಗಮ ದೇವಾ!”
ಮನೆಯಲ್ಲಿ ಮನೆಯೊಡೆಯನಿಲ್ಲದಿದ್ದಾಗ ಮನೆಯ ದುಃಸ್ಥಿತಿಯನ್ನು ರೂಪಕಗಳಿಂದ ಸ್ವಷ್ಟಪಡಿಸುವ ಬಸವಣ್ಣವರು, ಪರಮಾತ್ಮನಿಲ್ಲದ ತನುಮನದ ದುಃಸ್ಥಿತಿಯನ್ನು ಸೂಕ್ಷ್ಮವಾಗಿ ಚಿತ್ರಿಸುತ್ತಾರೆ. ಬಸವಣ್ಣನವರ ಮೇಲಿನ ವಚನದ ಪರದಿಯಲ್ಲೇ ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕಾದದ್ದು ಇಷ್ಟೇ; ನಮ್ಮ ಮನ ಮನೆ ಗುಡಿ ಮಠಗಳಲ್ಲಿ ಒಡೆಯ ಕ್ರಿಸ್ತನಿದ್ದಾನೆಯೇ? ಇಲ್ಲದೇ ಇದ್ದಲ್ಲಿ ಫ್ರಾನ್ಸಿಸ್ನಂತೆ ದುರಸ್ತಿಗೆ ಕಾರ್ಯಪ್ರವೃತರಾಗೋಣವೇ?
ಇನ್ನಾ