
ಬೆಂಗಳೂರಿಗರೇ,
ನಕ್ಷತ್ರಗಳ ಎಣಿಸಿದ್ದು ಸಾಕು
ಪಾತಾಳವ ಒಮ್ಮೆ ಇಣುಕ ಬನ್ನಿ
ಕೊಳವೆ ಬಾವಿಗಳು ಬಾಯಾರಿ ನಿಂತಿವೆ
ಖಾಲಿ ಕೊಡಗಳು ಜಪ ಹೇಳುತ್ತಿವೆ
ಉಸ್ಸ್ ಎನ್ನುವ ನಲ್ಲಿಯ ಕೆಳಗೆ
ಕಾಂಕ್ರೀಟ್ ಚಾಪೆಯ ಕೆಳಗೆ
ಮುಚ್ಚಿ ಹೋದ ಸೆಲೆಗಳೆಷ್ಟು
ಮಾಯವಾದ ಕೆರೆಗಳೆಷ್ಟು
ಮದ್ಯದಂಗಡಿಯ ಮುಂದೆ
ನಗರವೇ ಸಾಲುಗಟ್ಟಿದೆ
ಅಭಿವೃದ್ಧಿ ಎಂಬುದೇ ಅಮಲು
ಡೇವಿಡ್ ಕುಮಾರ್ . ಎ