ಪುನರುತ್ಥಾನ

Advertisements
Share

ಸರಿಯಿತು ಕಲ್ಲು ತೆರೆಯಿತು ಬಾಗಿಲು

ಯೇಸು ಹೊರಹೋಗಲೆಂದಲ್ಲ

ಹೊಸ ಜೀವ ಹೊಸ ಭಾವ

ಉದಯಿಸಿರುವುದ ನಾ ಕಾಣಲೆಂದು

 

ಕ್ರಿಸ್ತನೆದ್ದಿರುವನು ನಿಜ

ಆದರೆ ನಾನಿನ್ನೂ ಎದ್ದಿಲ್ಲ

ನಾನಿನ್ನೂ ಎದ್ದಿಲ್ಲ ಪಾಪಕೂಪದಿಂದ

 

ಕ್ರಿಸ್ತ ನೀ ಬಾರಾ ಪೊರೆಯೆನ್ನ

ದುರಾಸೆಯ ಬಲೆಯಿಂದ

ಅಸೂಯೆಯ ಸೆರೆಯಿಂದ

ಧನದಾಹದ ಮದದಿಂದ

 

ಹೆಸರು ಮಾಡುವ ಮೋಹ

ಅಳಿದುಹೋಗಲಿ ಸ್ವಾಮಿ

ಬದುಕಗೊಡಿಸುವ ಗುಣವು

ನನ್ನಲುದಯಿಸಲಿ

 

ನನ್ನಾತ್ಮ ಬಲವು ನೀನು

ನನ್ನ ಜೀವದ ಬೆಳಕು

ನಿನ್ನ ಭರವಸೆಯ ದಾರಿಯಲಿ

ಎನ್ನ ಮುನ್ನಡೆಸು

 

ಸಿ ಮರಿಜೋಸೆಫ್

 

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram