ಆತ ವಿದ್ವಾಂಸ ವಿವಿಧ ಧರ್ಮಗಳಲ್ಲಿ ಸೂಚಿಸುವ ಮೋಕ್ಷದ ಹಾದಿ ಕುರಿತು ಅಧ್ಯಯನ ನಡೆಸಿದ್ದ. ವಿವಿಧ ಧರ್ಮ, ಪಂಥಗಳ ಪ್ರಮುಖರನ್ನು ಕಂಡು ವಿಚಾರಿಸಿದ್ದ. ಹೀಗೆ ಝೆನ್ ಗುರು ಒಬ್ಬರನ್ನು ಕಂಡು ಕೇಳಿದ.
‘ನಿಮ್ಮಲ್ಲಿ ಮೋಕ್ಷಕ್ಕ ಹಾದಿ ಉಂಟೇ?’
‘ಯಾಕಿಲ್ಲ. ಖಂಡಿತ ಇದೆ’ ಗುರು ಹೇಳಿದರು.
‘ಏನದು?’ ಕುತೂಹಲದಿಂದ ಕೇಳಿದ ವಿದ್ವಾಂಸ.
‘ಹಸಿವಾದಾಗ ಊಟ. ದಣಿವಾದಾಗ ನಿದ್ದೆ.’
‘ಅರೇ! ಎಲ್ಲರೂ ಇದನ್ನೇ ತಾನೆ ಮಾಡೋದು ! ಇದರಲ್ಲೇನು ವಿಶೇಷ?’
‘ಎಲ್ಲರೂ ಸುಮ್ಮನೆ ಊಟ ಮಾಡ್ತಾರಾ? ನಾನಾ ಕಸುಬಿಷ್ಟೆ. ಉಪ್ಪು ಕಡಿಮೆ, ಹುಳಿ ಜಾಸ್ತಿ, ಇವತ್ತೂ ಅದೆ ಅನ್ನ ಸಾರು. ಹೀಗೆ ವರಾತ. ನಾವು ಹಾಗಲ್ಲ, ಹಸಿವಾದಾಗ ಊಟ ಮಾಡ್ತೀವಿ…”
‘ನಿದ್ದೆ?’
‘ನಿದ್ದೆ ಸುಮ್ಮನೇನಾ? ಮಲಗಿದಾಕ್ಷಣ ಬರುತ್ತಾ? ಇವತ್ತು ಹೀಗಾಯಿತು. ನಾಳೆ ಹೀಗಾಗಬೇಕು. ಅವನು ಹಾಗಂದ … ಇವನು ಹೀಗಂದ. ಸುಮ್ಮನೆ ನಾನಾ ಚಿಂತೆ. ನಾವು ಹಾಗಲ್ಲ; ದಣಿವಾದಾಗ ನಿದ್ದೆ ಮಾಡ್ತೀವಿ.’