ಅಚ್ಚರಿ

Advertisements
Share

ದೇಶವ ಕೆಡವಿ ಮಂದಿರ ಕಟ್ಟುವುದು
ಸುಲಭದ ಮಾತಲ್ಲ …!
ಕಟ್ಟಿದ ಮಳೆಬಿಲ್ಲುಗಳಿಗೆ
ಮಸಿ ಬಳಿಯಬೇಕು
ದೇಶ ಕಂಡ ಕನಸುಗಳಿಗೂ
ತೆರಿಗೆ ವಿಧಿಸಬೇಕು !

ಸೇತುವೆಗಳ ಮುರಿದು ಗೋಡೆಗಳ ಕಟ್ಟುವುದು
ಸುಲಭದ ಕೆಲಸವಲ್ಲ…!
ಕೊಯ್ಲಿಗೆ ಬಂದ ಪೈರು ಹೊಲಗಳ
ಹರಾಜಿಗೆ ಇಡಬೇಕು
ಯಾರಿಗೋ ಹುಟ್ಟಿದ ಕೂಸುಗಳಿಗೆ
ತನ್ನ ಹೆಸರಿಡಬೇಕು

ಮಾನವತೆಯ ಒಡೆದು ಮೂರ್ತಿಗಳ ನಿಲ್ಲಿಸುವುದು
ಸುಲಭದ ಮಾತಲ್ಲ… !
ಹಾರೋ ಹಕ್ಕಿಗಳ ಹಿಡಿದು
ಪಂಜರದೊಳು ಬಂಧಿಸಬೇಕು
ತನ್ನ ಮನೆಯ ಮಾಳಿಗೆಗೆ
ತಾನೇ ಕಲ್ಲು ಹೊಡೆಯಬೇಕು

ಡೇವಿಡ್ ಕುಮಾರ್. ಎ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram