ನಮ್ಮಮ್ಮ ಏನಂದುಕೊಳ್ಳಲ್ಲ! (ನೈತಿಕತೆ – 1)

Advertisements
Share

ಡಿಸೆಂಬರ್ 2012, ಲಂಡನ್ನಿನಲ್ಲಿ ಒಲಂಪಿಕ್ಸ್ ಕ್ರೀಡಾ ಸ್ಪರ್ಧೆಗಳು.
ಕೀನ್ಯಾದ ಅಥ್ಲೆಟ್ ಏಬಲ್ ಮ್ಯುಟೈ ನಿರಾಯಾಸವಾಗಿ ಕ್ರಾಸ್ ಕಂಟ್ರಿ ರನ್ನಿಂಗ್ ರೇಸಿನಲ್ಲಿ ಮುನ್ನಡೆ ಸಾಧಿಸುತ್ತಿದ್ದ. ಆದರೆ ಅಂತಿಮ ಘಟ್ಟ ಅಂದರೆ ಫಿನಿಶಿಂಗ್ ಲೈನ್ ತಲುಪಿದ್ದೇನೆಂದು ಆತ ಓಡುವುದನ್ನು ನಿಲ್ಲಿಸಿ, ಕೆಲವು ಮೀಟರುಗಳ ಹಿಂದೆಯೇ ನಿಂತುಬಿಟ್ಟ. ಮಾಡಿರುವ ಅಂತಿಮ ಘಟ್ಟದ ವಿವಿಧ ಪಟ್ಟಿಗಳ ರೀತಿ ಅವನಲ್ಲಿ ಗೊಂದಲ ಮೂಡಿಸಿತ್ತು, ಅದ್ಯಾವುದೋ ಪ್ರಧಾನವಾಗಿ ಕಾಣುವ ಪಟ್ಟಿಯ ಬಳಿ ನಿಂತು ತಾನು ಗೆದ್ದೆನೆಂದು ಭಾವಿಸಿಬಿಟ್ಟ ಅವನ ಹಿಂದೆಯೇ ಓಡುತ್ತಾ ಬಂದ ಸ್ಪೈನ್ ದೇಶದ ಅಥ್ಲೆಟ್ ಐವನ್ ಫರ್ನಾಂಡೀಸ್ ಸಹಜವಾಗಿ ಎರಡನೆಯ ಸ್ಥಾನಕ್ಕೆ ಬರಬೇಕಿದ್ದವನು, ಏಬಲ್ ತನ್ನ ಗೊಂದಲದಿಂದ ಫೈನಲ್ ಪಟ್ಟಿಯ ಮುಂಚೆಯೇ ನಿಂತಿರುವುದನ್ನು ನೋಡಿದ್ದು ತಿಳಿಯಿತು. ಅವನಿಗೆ ಅರ್ಥವಾಯ್ತು ಇವನಿಗಾಗಿರುವ ಗೊಂದಲ. ಅವನು ಜೋರಾಗಿ ಕಿರುಚಿ ಏಬಲ್ ಮ್ಯುಟೈಗೆ ಹೇಳಿದ, “ಇದಲ್ಲ ಫೈನಲ್ ಲೈನ್, ಅದು, ಅದು, ಓಡು ಓಡು” ಎಂದು. ಆದರೆ ಮ್ಯುಟೈಗೆ ಐವನ್ ಏನು ಹೇಳುತ್ತಿದ್ದಾನೆಂದು ಅರ್ಥವೇ ಆಗಲಿಲ್ಲ. ಐವನ್ ಅವನನ್ನು ದಾಟಿ ಮುಂದೆ ಓಡಿ ಫೈನಲ್ ಪಟ್ಟಿಯನ್ನು ಮುಟ್ಟಿ ಗೆಲುವನ್ನು ಸಾಧಿಸಬಹುದಾಗಿತ್ತು. ಆದರೆ ಅವನು ಮ್ಯುಟೈಯನ್ನು ಅಕ್ಷರಶಃ ಮುಂದಕ್ಕೆ ತಳ್ಳಿ ಮೊದಲನೆ ಸ್ಥಾನದಲ್ಲಿ ವಿಜಯಿಯಾಗುವಂತೆ ಮಾಡಿದ.
ಈ ಸ್ಪರ್ಧೆಯ ನಂತರ ಪತ್ರಕರ್ತರು ಐವಾನ್ ಫರ್ನಾಂಡಿಸನನ್ನು ಪ್ರಶ್ನಿಸಿದರು. “ನೀನೇಕೆ ಹಾಗೆ ಮಾಡಿದೆ? ಕೀನ್ಯಾದ ಕ್ರೀಡಾಪಟುವನ್ನು ನೀನೇಕೆ ಗೆಲ್ಲಲು ಬಿಟ್ಟೆ?””
“ನಾನೇನೂ ಬಿಡಲಿಲ್ಲ. ಅವನೇ ಗೆಲ್ಲಲಿದ್ದ” ಎಂದ ಫರ್ನಾಂಡಿಸ್.
“ಆದರೆ ನೀನೇ ಗೆಲ್ಲಬಹುದಿತ್ತು” ಎಂದ ಪತ್ರಕರ್ತ.
ಫರ್ನಾಂಡಿಸ್ ಉತ್ತರಿಸಿದ. “ಆದರೆ, ಆಗ ನನ್ನ ಗೆಲುವಿನ ಅರ್ಹತೆ ಏನಾಗಿರುತಿತ್ತು? ಆ ಪದಕದ ಮೌಲ್ಯವೇನಾಗಿರುತಿತ್ತು? ನನ್ನ ಅಮ್ಮ ಏನಂದುಕೊಳ್ಳುತ್ತಿದ್ದಳು?”
ಇದನ್ನೇ ನೈತಿಕ ಭಯ ಎನ್ನುವುದು.
“ನಾನು ಮೊದಲ ಸ್ಥಾನಕ್ಕೆ ಅರ್ಹನಾಗಿರಲಿಲ್ಲ. ನಾನು ಏನು ಮಾಡಬೇಕೋ ಅದನ್ನೇ ಮಾಡಿದ್ದೇನೆ. ಗೆಲುವಿನ ಹಕ್ಕುದಾರ ಅವನು. ನಾನು ಮುಟ್ಟಲಾಗದಂತಹ ಅಂತರವನ್ನು, ಅವನ ಒಂದು ತಪ್ಪಿನಿಂದಾಗಿ, ನಾನು ಮುಟ್ಟುವಂತಾಯ್ತು. ಅವನು ನಿಲ್ಲುವುದನ್ನು  ನೋಡುತ್ತಿದ್ದಂತೆಯೇ ನಾನೇ ಅಂದುಕೊಂಡೆ, ನಾನು ಅವನನ್ನು ದಾಟಿ ಹೋಗಲಾರೆ ಎಂದು.”
ಗೆಲುವಿಗಾಗಿ ಹಂಬಲಿಸಲು ಪಡುತ್ತಿರುವ ಶ್ರಮದಲ್ಲಿ ಆಯಾಸಗೊಂಡಿದ್ದರೂ ಐವಾನ್ ಫರ್ನಾಂಡಿಸ್ ಮನುಷ್ಯತ್ವದ ಘನತೆ ಮತ್ತು ನೈತಿಕತೆಯ ಮೌಲ್ಯವನ್ನು ಎತ್ತಿ ಹಿಡಿದ.
ಫರ್ನಾಂಡಿಸಿನ ಕೋಚ್ ಕೂಡಾ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದು ಇದನ್ನೇ. ಫರ್ನಾಂಡಿಸ್ ಮ್ಯುಟೈಗೆ ಸಮಾನನಲ್ಲ. ಗೆಲ್ಲಬೇಕಾದುದು ಮನುಷ್ಯನ ಅಹಂಕಾರವಲ್ಲ. ಮನುಷ್ಯತ್ವದ ನೈತಿಕತೆ. ಇದನ್ನೇ ಸ್ಪೈನ್ ದೇಶದ ಐವಾನ್ (ಇವಾನ್) ಫರ್ನಾಂಡಿಸ್ ನಮಗೆ ಪ್ರದರ್ಶಿಸಿದ್ದು. ಗೆಲುವು ಮತ್ತು ಸೋಲು ಎಂಬುದು ತಾಂತ್ರಿಕ ಕ್ರಿಯೆಯ ಫಲಿತಗಳು. ನೈತಿಕತೆಯ ಪಾಲನೆ ಮನುಷ್ಯತ್ವದ ಘನತೆಯ ಸಂಕೇತಗಳು.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram