
ಮರಿಯಳು ಪ್ರಭುವಿನ ಪಾದತಳದಲ್ಲಿ ಕುಳಿತು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿ ಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಮಾರ್ತಳು “ಪ್ರಭೂ ನನ್ನ ಸೋದರಿ ಈ ಕೆಲದವನ್ನೆಲಾ ನನ್ನೊಬ್ಬಳಿಗೆ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ” ಎಂದು ಯೇಸುವನ್ನು ಕೇಳಿಕೊಂಡಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ “ಮಾರ್ತ ಮಾರ್ತ, ನೀನು ಅನವಶ್ಯಕ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು” ಎಂದರು.
ಮರಿಯಳು ಏನು ಮಾಡದೆ ನಿಷ್ಕ್ರಿಯವಾಗಿರುವಂತೆ ನಮಗೆ ಕಾಣಿಸುತ್ತದೆ. ಇನ್ನೊಂದು ಕಡೆ ಅತಿಥಿ ಸತ್ಕಾರದ ಗಡಿಬಿಡಿಯಲ್ಲಿದ್ದ ಮಾರ್ತಳಿಗೆ “ ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ ಅದನ್ನು ಆಕೆಯಿಂದ… ಎಂದು ಯೇಸು ಹೇಳಿದನು ಕೇಳಿ ನಮಗೆ ಆಶ್ಚರ್ಯವಾಗಿರಬಹುದಲ್ಲವೇ?
ಯೇಸುವಿನ ಬೋಧನೆಗೆ ಕಿವಿಗೊಡುವುದನ್ನು ನಾವು ನಿರಂತರವಾಗಿ ಮಾಡಬೇಕಾದ್ದ ಕರ್ತವ್ಯ. ಆಲಿಸುವ ಕ್ರಿಯೆವೆಂಬುವುದು ಕೇಳಿಸಿಕೊಳ್ಳುವುದು ಕೇಳಿಸಿಕೊಂಡಿದ್ದನ್ನು ಅರ್ಥೈಸಿಕೊಂಡು, ಸ್ವೀಕರಿಸಿ ಮೈಗೂಡಿಸಿಕೊಳ್ಳುವ ಒಂದು ಪ್ರಕ್ರಿಯೆ.
ಯೇಸುವಿನ ಬೋಧನೆಗೆ ಕಿವಿಗೊಡದೆ ನಮ್ಮ ಕೆಲಸಕಾರ್ಯಗಳ ದಿಕ್ಕುದೆಸೆ ತಿಳಿಯುವುದಾದರೂ ಹೇಗೆ? ನಾವೆಲ್ಲರು ಸರಿಯಾದ ಕೆಲಸಕಾರ್ಯಗಳಲ್ಲಿ ಮಗ್ನರಾಗಿದ್ದೇವೆಯೇ? ಎಂಬ ಪ್ರಶ್ನೆಗೆ ಉತ್ತರವನ್ನು ತಿಳಿಯುವುದಾದರೂ ಹೇಗೆ? ಆದ್ದರಿಂದ ನಾವು ಆಲಿಸಬೇಕು, ವಿವೇಚಿಸಬೇಕು ಮತ್ತು ಪ್ರಾರ್ಥಿಸಬೇಕು. ಪ್ರಾರ್ಥಿಸಲು ನನಗೆ ಸಮಯವಿಲ್ಲವೆಂದರೆ ನನ್ನ ಕ್ರೈಸ್ತ ಜೀವನದಲ್ಲಿ ಏರುಪೇರು ಆಗಿದೆ ಅಂತ ಅರ್ಥ…
ಅನು