ಹೋಗದಿರು ದೇಗುಲಕೆ

Advertisements
Share

ಹೋಗದಿರು ದೇಗುಲಕೆ
ಹೂವೆರಚಲು ಶ್ರೀಚರಣದಿ
ಮೊದಲು ನಿನ್ನ ಮನೆಯ ತುಂಬು
ಒಲುಮೆ ಕರುಣೆ ಪರಿಮಳದಿ

ಹೋಗದಿರು ದೇಗುಲಕೆ
ಮೋಂಬತ್ತಿಯ ಹಚ್ಚಲು
ಕಿತ್ತೊಗೆಯೋ ಮೊದಲು ನಿನ್ನ
ಮನದಲಿರುವ ಕತ್ತಲು

ಹೋಗದಿರು ದೇಗುಲಕೆ
ಜಪತಪದಲಿ ತಲೆಬಾಗಲು
ನಮನ ವಿನಯ ಕ್ಷಮೆಯು ಇರಲಿ
ನೆರೆಹೊರೆಯಲಿ ಸುತ್ತಲೂ

ಹೋಗದಿರು ದೇಗುಲಕೆ
ಮಂಡಿಯೂರಿ ಬಾಗಲು
ಬಾಗು ಮೊದಲು ಎಳೆಯರನ್ನು
ಕೆಳೆಯರನ್ನು ಎತ್ತಲು

ಹೋಗದಿರು ದೇಗುಲಕೆ
ಪಾಪಗಳನು ಕಳೆಯಲು
ಮೊದಲು ನೀನು ಕ್ಷಮಿಸ ಕಲಿಯೋ
ಹೃದಯ ಕಲುಷ ತೊಳೆಯಲು

ಮನಮಂದಿರವೇ ಅವನ ನೆಲೆಯು
ಎಂಬುದನ್ನು ಮರೆಯದಿರು
ಮನವೇ ಅವನ ಗರ್ಭಗುಡಿಯು
ಮನುಜರನ್ನು ದೂರದಿರು

ತಿರಿವವನಿಗೆ ಮರುಕವಲ್ಲ
ಕೊಡು ಅವನಿಗೇನಾದರೂ
ಅದುವೆ ದೊಡ್ಡ ತೀರ್ಥಯಾತ್ರೆ
ಯಾತ್ರಿಗದುವೆ ಪುಣ್ಯವು

ಮೂಲ: ರವೀಂದ್ರನಾಥ ಠಾಗೋರ್
ಕನ್ನಡಕ್ಕೆ: ಸಿ ಮರಿಜೋಸೆಫ್

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram