
ಈಜಿಪ್ಟಿನ ರಾಜ ಫೆರೋವಿನ ಪಿರಮಿಡ್ ಒಂದಕ್ಕೆ ತಳಪಾಯ ಹಾಕುವ ಕೆಲಸದ ಉಸ್ತುವಾರಿಯನ್ನು ಆ ಯುವ ಮೇಸ್ತ್ರಿ ನೋಡಿಕೊಳ್ಳುತ್ತಿದ್ದ. ಉರಿಬಿಸಿಲಿನಲ್ಲಿ ನಿಂತು, ಕೆಲಸದಾಳುಗಳನ್ನು ಹುರಿದುಂಬಿಸುತ್ತ, ಅವರ ಕೆಲಸವನ್ನು ಸೂಕ್ಷ್ಮವಾಗಿ ನೋಡಿ ಪರಿಶೀಲಿಸುತ್ತ, ತಪ್ಪುಗಳನ್ನು ತಿದ್ದುತ್ತಿದ್ದ. ಯಾವುದಾದರೂ ಒಂದು ಕಲ್ಲು ಸರಿಯಾಗಿ ಕುಳಿತಿಲ್ಲ ಅಂದರೆ ಅದನ್ನು ಅಲ್ಲಿಗೇ ಬಿಡದೆ, ಪ್ರತಿಯೊಂದು ಕಲ್ಲನ್ನೂ ಸರಿಪಡಿಸಿ, ಎಲ್ಲವೂ ಕ್ರಮಬದ್ಧವಾಗಿ ಕೂರುವಂತೆ ಮಾಡಿಸುತ್ತಿದ್ದ. ಇದನ್ನೆಲ್ಲ ಗಮನಿಸುತ್ತಿದ್ದ ಇನ್ನೊಬ್ಬ ಮೇಸ್ತ್ರಿ ಕೊನೆಗೂ ತಾಳಲಾರದೆ ಅವನಿಗೆ ಬುದ್ಧಿ ಹೇಳಲು ಬಂದ. “ಈ ಅಡಿಪಾಯ ಭೂಮಿಯ ಒಳಗೆ ಇರುತ್ತದೆ. ಯಾರಿಗೂ ಅದು ಕಾಣಿಸುವುದಿಲ್ಲ. ಅದಕ್ಕೆ ಇಷ್ಟು ಯೋಚನೆ ಮಾಡಬೇಡ. ಯಾರಿಗೂ ಅದು ಗೊತ್ತಾಗುವುದಿಲ್ಲ,” ಎಂದ. “ಯಾರಿಗೆ ಗೊತ್ತಾಗದಿದ್ದರೂ ನನಗೆ ಗೊತ್ತಾಗುತ್ತದೆಯಲ್ಲ?!” ಎಂದ ಆ ಯುವಮೇಸ್ತ್ರಿ, ತನ್ನ ಕೆಲಸ ಮುಂದುವರೆಸಿದ.
ಸಂಗ್ರಹ ಇನ್ನಾ