ನಿನ್ನ ಸಮಸ್ಯೆ ಪರಿಹಾರವಾಗುವುದು

Advertisements
Share

ಒಬ್ಬ ವ್ಯಕ್ತಿ ಜೀವನದಲ್ಲಿ ತುಂಬಾ ಜಿಗುಪ್ಸೆ ಹೊಂದಿದ್ದ. ಅವನಿಗೆ ತನ್ನ ಸ್ಥಿತಿಯ ಬಗ್ಗೆ ನೆನೆದರೆ ಕೋಪ ಬರ್ತಾ ಇತ್ತು. ನನಗೆ ಮಾತ್ರ ಏಕೆ ಹೀಗಾಗುತ್ತಿದೆ ಎಂದು ಯೋಚಿಸಿ ತಲೆ ಕೆಡಿಸಿಕೊಂಡಿದ್ದನು. ನನ್ನ ಸಮಸ್ಯೆಗೆ ಝೆನ್ ಗುರುಗಳನ್ನು ಕಂಡರೆ ಪರಿಹಾರ ಸಿಗಬಹುದೆಂದು ತೀರ್ಮಾನಿಸಿ ಝೆನ್ ಗುರುಗಳನ್ನು ಭೇಟಿಯಾದನು. ಝೆನ್ ಗುರುಗಳಿಗೆ ಅವನ ಮುಖ ನೋಡಿದಾಗಲೇ ತುಂಬಾ ಸಮಸ್ಯೆ ಇರುವಂತೆ ತೋರಿತ್ತು. ಅವನು ಗುರುಗಳ ಹತ್ತಿರ “ಗುರುಗಳೇ ನನಗೆ ಜೀವನ ಸಾಕಾಗಿದೆ. ನನಗೆ ಏನಾಗಿದೆ, ನಾನು ಯಾರು?” ಎಂದು ಬಡಬಡಿಸುತ್ತಿದ್ದ. ಗುರುಗಳು ಏನೂ ಮಾತನಾಡಲಿಲ್ಲ. ಆ ವ್ಯಕ್ತಿಯು ಗುರುಗಳ ಹತ್ತಿರ “ನನ್ನ ಸಮಸ್ಯೆಗೆ ಪರಿಹಾರ ನೀಡಿ” ಎಂದು ಬಗೆಬಗೆಯಾಗಿ ಬೇಡಿಕೊಂಡನು. ಆದರೂ ಗುರುಗಳು ತುಟಿಪಿಟಕ್ ಎನ್ನಲಿಲ್ಲ. ಆ ವ್ಯಕ್ತಿಗೆ ತುಂಬಾ ಕೋಪ ಬಂತು. ಗುರುಗಳ ಹತ್ತಿರ ಪರಿಹಾರ ದೊರಕುವುದಿಲ್ಲ ಎಂಬುದು ಭಾಸವಾಯಿತು. ನನ್ನ ಸಮಸ್ಯೆಯನ್ನು ನಾನೇ ಎದುರಿಸುತ್ತೇನೆ, ಇವರ ಸಹಾಯ ಬೇಕಾಗಿಲ್ಲ ಎಂಬ ಛಲದಿಂದ ಎದ್ದು ಹೊರನಡೆದನು. ಆಗ ಗುರುಗಳು ಅವನನ್ನು ಕರೆದು ಅವನ ಮುಖವನ್ನು ದಿಟ್ಟಿಸಿ ನೋಡುತ್ತಾ “ಈಗ ನಿನಗೆ ಎಲ್ಲವನ್ನು ಎದುರಿಸುತ್ತೇನೆ ಎಂಬ ಛಲ ಬಂತು ಅಲ್ಲವೇ? ನಿನಗೆ ನೀನು ಯಾರು, ನಿನ್ನ ಶಕ್ತಿ ಏನು ಎಂದು ತಿಳಿಯಿತು, ಆದ್ದರಿಂದ ಇನ್ನು ನಿನ್ನ ಸಮಸ್ಯೆ ಪರಿಹಾರವಾಗುವುದು” ಎಂದರು.

ಸಂಗ್ರಹ ಇನ್ನಾ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram