
ಗೋಶಾಲೆಯಲ್ಲಿ ಕೆಸರು, ಸಗಣಿ, ಗಂಜ್ಲ ಬಿಟ್ರೆ ನೀವು ಹೇಳುವ ಹಾಗೆ ಬೇರೇನೂ ನನಗೆ ಕಾಣಿಸಲೇ ಇಲ್ಲ !
ಗೋಶಾಲೆಯಲ್ಲಿ ಹುಟ್ಟಿದ ಮಗು ಯೇಸುವನ್ನು ಕಾಣಲು ಹಸು, ಕುರಿ, ಎತ್ತು, ಮೇಕೆ, ಕೋಳಿ ಹೀಗೆ ಹಲವಾರು ಪ್ರಾಣಿಪಕ್ಷಿಗಳು ಹೋದವು. ಜತೆಗೆ ಹಂದಿಯು ಸಹ ಇತರರನ್ನು ಸೇರಿ ಗೋದಲಿ ಕಡೆ ಹೋಗಿತ್ತು. ಅಲ್ಲಿ ಕಂಡ ಅತ್ಯಾಕರ್ಷಕ ದೃಶ್ಯವನ್ನು ಕಂಡು ಮನಸೋತು ತಮ್ಮ ವಾಸಸ್ಥಳಕ್ಕೆ ಹಿಂದಿರುಗಿದ ಪ್ರಾಣಿಪಕ್ಷಿಗಳು ತಮ್ಮ ಕಣ್ಣುಗಳನ್ನು ತುಂಬಿಕೊಂಡಿದ್ದ ಮನೋಹರ ದೃಶ್ಯವನ್ನು ವರ್ಣಿಸಿ ಹೇಳಲಾರಂಭಿಸಿದವು. ಎಲ್ಲಾ ಪ್ರಾಣಿಪಕ್ಷಿಗಳ ವರ್ಣನೆಯನ್ನು ಆಲಿಸಿದ ಹಂದಿ ಹೇಳಿತಂತೆ: “ಗೋಶಾಲೆಯಲ್ಲಿ ಕೆಸರು, ಸಗಣಿ, ಗಂಜ್ಲ ಬಿಟ್ರೆ ನೀವು ಹೇಳುವ ಹಾಗೆ ಬೇರೇನೂ ನನಗೆ ಕಾಣಿಸಲೇ ಇಲ್ಲ” ಎಂದು.
ಹೌದು ಬನ್ನಿ ಸಾಕಷ್ಟು ಸ್ಥಳವಿದೆ ಒಳಗೆ ಬನ್ನಿ
ಯೇಸುವಿನ ಜನನದ ರೂಪಕವನ್ನು ಅಭಿನಯಿಸುತ್ತಿದ್ದ ಸಂದರ್ಭ. ಮರಿಯಳಿಗೆ ಪ್ರಸವಕಾಲ ಸಮೀಪಿಸಿ ಹೆರಿಗೆಗೆ ಒಂದು ಮನೆಯು ಬೇಕಾಗಿತ್ತು. ಪರಸ್ಥಳ ಬೆತ್ಲೆಹೇಮಿನ್ನಲೆಲ್ಲಾ ಮನೆಗಾಗಿ ಕಾಡಿ ಬೇಡಿ ಹುಡುಕಾಡಿದರೂ ಸಿಗದೆ ಕೊನೆಗೆ ಒಂದು ಗೋದಲಿಯಲ್ಲಿ ಯೇಸು ಹುಟ್ಟುವ ದೃಶ್ಯವನ್ನು ಅಭಿನಯಿಸಿ ತೋರಿಸಬೇಕಾಗಿತ್ತು.
ಮನೆಯನ್ನು ಕೇಳಿಕೊಂಡು ಬರುವ ಜೋಸೆಫ್ ಮತ್ತು ಮರಿಯಳಿಗೆ ಛತ್ರದ ಯಜಮಾನನ ಪಾತ್ರವಹಿಸಿದ ಒಬ್ಬ ಪುಟ್ಟ ಬಾಲಕ “ಮನೆ ಖಾಲಿ ಇಲ್ಲ” ಎಂದು ಬೈದು ಅವರನ್ನು ವಾಪಸ್ಸು ಕಳಿಸುವಂತೆ ಅಭಿನಯಿಸಬೇಕಾಗಿತ್ತು. ಆದರೆ ಜೋಸೆಫ ಮತ್ತು ಮರಿಯಳ ಕಷ್ಟವನ್ನು ಕಂಡು ” ಹೌದು ಬನ್ನಿ ಛತ್ರದಲ್ಲಿ ಸಾಕಷ್ಟು ಸ್ಥಳವಿದೆ ಒಳಗೆ ಬನ್ನಿ” ಎಂದು ಹೇಳಿ, ಮುಂದುವರಿಯಬೇಕಾಗಿದ್ದ ನಾಟಕವನ್ನು ಕೊನೆಗೊಳಿಸಿಯೇ ಬಿಟ್ಟ.
ಅನು