ಕುರ್ಚಿ

Advertisements
Share

ಕೆಲವು ದಿನಗಳ ಹಿಂದೆ, ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಪ್ರಬೋಧನೆ ಮಾಡುತ್ತಿದ್ದ ಗುರುಗಳು ಹೇಳಿದ ಕುರ್ಚಿಯ ಕಥೆಯಿದು. ಒಂದು ಮೇಜಿನ ಮೇಲೆ ಮನುಷ್ಯನ ಅರೋಗ್ಯಕ್ಕೆ, ಒಟ್ಟಾರೆ ಜೀವಕ್ಕೆ ಅಪಾಯಕಾರಿಯಾದ ಎಲ್ಲಾ ರೀತಿಯ ವಸ್ತುಗಳನ್ನು ಅಂದರೆ ಸಿಗರೇಟ್, ವಿಸ್ಕಿ, ರಮ್, ಗಾಂಜಾ,ಮುಂತಾದ ಮಾದಕ ವಸ್ತುಗಳನ್ನು ಇರಿಸಿ ಅವುಗಳನ್ನು ಕೈಬೆರಳಿನಿಂದ ತೋರಿಸುತ್ತಾ.. ಇವುಗಳಲ್ಲಿ ಯಾವುದು ಜೀವಕ್ಕೆ ಅತ್ಯಂತ ಅಪಾಯಕಾರಿ? ಎಂದು ಪ್ರಶ್ನೆ ಕೇಳಿದಾಗ, ನೆರೆದಿದ್ದ ಜನರಲ್ಲಿ ಒಬ್ಬನು ಮೇಜಿನ ಪಕ್ಕದಲ್ಲಿದ್ದ ಕುರ್ಚಿಯನ್ನು ತೋರಿಸಿ “ ಬದುಕಿಗೆ ಅತ್ಯಂತ ಅಪಾಯಕಾರಿಯೆಂದರೆ ಕುರ್ಚಿ” ಎಂದು ಹೇಳಿದನಂತೆ. ಕುರ್ಚಿ ಇಲ್ಲಿ ಅಧಿಕಾರದ ರೂಪಕವಷ್ಟೆ. ಈ ಅಧಿಕಾರವೆಂಬುದು ಬದುಕಿಗೆ ತುಂಬಾ ಅಪಾಯಕಾರಿನಾ? ಕುರ್ಚಿಯ ಬಗೆಗಿನ ಪಿ. ಲಂಕೇಶ್‍ರವರ ಒಂದು ಪುಟ್ಟ ಪದ್ಯ:

ಮರ, ಕುರ್ಚಿ
ಮರ ಬಿರುಗಾಳಿಗೆ ಅಲ್ಲಾಡಿದ್ದ ಕಂಡ
ಬಡಗಿ
ಕತ್ತರಿಸಿ ಕುರ್ಚಿ ಮಾಡಿದ
ಸಾಹಿತಿಗಳು, ಪೋಲಿಸರು, ನ್ಯಾಯಾಧೀಶರಿಗಾಗಿ ;
ಸೋಮಾರಿಗಳು, ಸಂಸಾರಿಗಳಿಗಾಗಿ,
ಕುರ್ಚಿ ಮುರಿದು ಮಣ್ಣು ಸೇರಿ
ಹೊಸ ಮರ ಬೆಳೆಯಲು ನೆರವಾದದ್ದು
ಸಹಸ್ರಾರು ವರ್ಷಗಳ ಬಳಿಕ.

ಈ ನಡುವೆ ಕುರ್ಚಿಯನ್ನು
ಬಳಸಿದವರು
ಚಿಂತಿಸಿದ್ದು ಮತ್ತು ಮಾಡಿದ್ದು
ಮನುಕುಲ ದುಗುಡುವ
ಹೆಚ್ಚಿಸಿತೆಂಬುದು
ನನ್ನ ನಮ್ರ ಊಹೆ..

ಇನ್ನಾ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram