
ಸೃಷ್ಟಿ ಹೇಳ್ವ ಅಳಲು ಕೇಳ್ವ ಕರ್ತ ಕ್ರಿಸ್ತನಾಥನು
ತನ್ನ ಸೃಷ್ಟಿ ಮನುಜರೂಪಿ ತಾನೇ ಆದ ಆತನು
ಬರುವಾತ ಇಳೆಗೆ ಸೂರ್ಯ ಬೀರ್ವ ಬೆಳಕ ಬಿತ್ತಲು
ಬರುವ ಗಳಿಗೆ ಹೊನಲು ಇಲ್ಲ ಎಲ್ಲೂ ಬರಿಯ ಕತ್ತಲು
ರತ್ನತೊಟ್ಟು ಬರುವದಾರಿ ಸೋನೆ ಮೇಘ ಮೆಟ್ಟಿಲು
ಬರುವ ಹಟ್ಟಿ ಶೂನ್ಯತಳದ ಬರಿದು ಬೇಗೆ ಬಟ್ಟಲು
ಸರ್ವಲೋಕ ಸರ್ವಶಕ್ತ ಏಕಮಾತ್ರ ದೇವನು
ತುಳಿತ ದಲಿತ ಕರಿಯ ಜನರ ನೆಳಲು ಮಾತ್ರ ಕಾಣ್ವನು
ಬೆತ್ತಲಾದ ಜಗಕ್ಕೆ ಕ್ರಿಸ್ತ ರಕ್ಷೆ ಕೋಟೆ ಕೊತ್ತಲು
ಬಸಿದು ಬಂದ ಬಸಿರ ಸುತ್ತ ಶೇಷ ಉಸಿರು ಕಾವಲು
ನೆಲದ ಆ ನಿರೀಕ್ಷೆ ಮೀರಿ ಅವತರಿಸಿದ ದೇವನು
ನಮ್ಮ ಮನದಲ್ಲಿ ಜಾಗ ಅಲ್ಪ ಸಿಕ್ಕರೂ ಸಾಕು…
ಮತ್ತೆ ಹುಟ್ಟಿ ಬರುವನು..
ಕ್ರಿಸ್ತ ಮತ್ತೆ ಹುಟ್ಟಿ ಬರುವನು….!!
ಇಗ್ನೇಷಿಯಸ್ ಸಂತೋಷ್