ನನ್ನ ಹೆಸರಿಗೆ ಆಸ್ತಿ ಬರೆಯೋದಕ್ಕೆ ಯಾರೂ ಉಳಿದಿಲ್ವಲ್ಲ!”

Advertisements
Share

ಮುಲ್ಲಾ ನಸ್ರುದ್ದೀನ್ ಒಂದು ದಿವಸ ದುಃಖದಿಂದ ಕುಳಿತುಕೊಂಡಿದ್ದ. ಮುಲ್ಲಾನನ್ನು ನೋಡಲು ಆತ್ಮೀಯ ಸ್ನೇಹಿತ “ಯಾಕೆ ಶೋಕದಿಂದ್ದೀಯ? ಎಂದು ಕೇಳಿದ. ಮುಲ್ಲಾ ಅಳುವುದಕ್ಕೆ ಪ್ರಾರಂಭಿಸಿಬಿಟ್ಟ. “ನನ್ನ ಮಾವ ತಮ್ಮ ಹೆಸರಲ್ಲಿದ್ದ ಆಸ್ತಿಯನ್ನೆಲ್ಲ ನನ್ನ ಹೆಸರಿಗೆ ಬರೆದಿಟ್ಟು ಬಿಟ್ಟು ಸತ್ತುಹೋದರು! ಅದನ್ನು ಯೋಚಿಸಿಯೇ ಅಳುತ್ತಿದ್ದೇನೆ” ಎಂದ ಮುಲ್ಲಾ .“ನಿನ್ನ ಮಾವ ನಂಗೊತ್ತು. ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತಲ್ಲ… ಸಾವು ಸಹಜವಾದದ್ದು ತಾನೇ ? ಅದಕ್ಕೋಸ್ಕರ ಯಾಕೆ ಇಷ್ಟೊಂದು ದುಃಖ? ನಿಜ ಹೇಳಬೇಕಾದರೆ, ಅವರ ಅಷ್ಟೊಂದು ಆಸ್ತಿ ನಿನಗೆ ಬರುತ್ತಿರುವುದಕ್ಕೆ ನೀನು ಸಂತೋಷಪಡಬೇಕು” ಎಂದು ಮುಲ್ಲಾನಿಗೆ ಮಿತ್ರ ಸಾಂತ್ವನ ಹೇಳಲು ಪ್ರಯತ್ನಿಸಿದ. ಆದರೆ ಮುಲ್ಲಾ “ನನ್ನ ದುಃಖ ನಿನಗರ್ಥವಾಗೋದಿಲ್ಲ ಮಿತ್ರ! ಹೋದ ವಾರವೇ ನನ್ನ ಚಿಕ್ಕಪ್ಪ, ನನ್ನ ಹೆಸರಿಗೆ ಒಂದು ಲಕ್ಷದಷ್ಟು ಆಸ್ತಿ ಬರೆದಿಟ್ಟು ಸತ್ತುಹೋದರು” ಎಂದು ಹೇಳಿ ಇನ್ನೂ ಜೋರಾಗಿ ಸದ್ದು ಮಾಡುತ್ತ ಅಳತೊಡಗಿದ. ಆ ಮಿತ್ರನಿಗೆ ಆಶ್ಚರ್ಯ! “ನಿನ್ನ ಚಿಕ್ಕಪ್ಪನವರೂ ನಂಗೊತ್ತು… ಅವರಿಗೂ ಎಂಬತ್ತೈದು ವರ್ಷ ವಯಸ್ಸು… ಹಣ ಬಂದದ್ದನ್ನು ತಿಳಿದು ಸಂತೋಷಪಡೋ ಬದ್ಲು ಮಂಗನ ಹಾಗೆ ಹೀಗೆ ಅಳ್ತಿದ್ದೀಯಲ್ಲ?” ಎಂದು ಮಿತ್ರ ಬೇಸರದಿಂದ ಕೇಳಿದ. “ನನ್ನ ದುಃಖ ಇನ್ನೂ ದೊಡ್ಡದು. ನನ್ನ ನೂರು ವರ್ಷ ವಯಸ್ಸಿನ ತಾತ ಎರಡು ಲಕ್ಷಕ್ಕೂ ಹೆಚ್ಚು ಆಸ್ತಿಯನ್ನು ನನ್ನ ಹೆಸರಿಗೆ ಬರೆದಿಟ್ಟು ನಿನ್ನೆ ಸತ್ತುಹೋದರು’ ಎಂದ ಮುಲ್ಲಾ. ಮಿತ್ರನಿಗೆ ಕೋಪವೇ ಬಂತು. “ನನಗರ್ಥಾನೇ ಆಗ್ತಿಲ್ಲ. ನೀನು ಯಾಕಾದ್ರೂ ಅಳ್ತಿದ್ದೀಯಾ ತಿಳೀತಿಲ್ಲ” ಎಂದ,
ಮುಲ್ಲಾ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಹೇಳಿದ: “ಹಣವಂತರಾದ ನನ್ನ ಮಾವ, ಚಿಕ್ಕಪ್ಪ, ತಾತ ಎಲ್ಲರೂ ಸತ್ತುಹೋದ್ರು. ಇನ್ನು ಮೇಲೆ

ಸಂಗ್ರಹ ಇನ್ನಾ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram