
ದನಿ ಇದೊಂದು ಸಾಹಿತ್ಯ ಪತ್ರಿಕೆ. ಕನ್ನಡದ ಭಾಷೆಯಲ್ಲಿ ಕಥೋಲಿಕ ಕ್ರೈಸ್ತರ ಅರಿವು, ಅನುಭವ ಮತ್ತು ತತ್ವಗಳ ಒಳಹರಿವುಗಳನ್ನು ಅಕ್ಷರಗಳ ರೂಪದಲ್ಲಿ ಇಳಿಸುವ ಸಣ್ಣ ಪ್ರಯತ್ನವಾಗಿದೆ. ಇದರಲ್ಲಿ ವೈಚಾರಿಕ ಲೇಖನಗಳು, ಅಭಿಮತ ಮತ್ತು ದೇವರ ಉಪಾಸನೆಗಳನ್ನು ಸುಮಾರು 6 ವರ್ಷಗಳಿಂದಲೂ ಇ-ಪತ್ರಿಕೆಯ ರೂಪದಲ್ಲಿ ಪ್ರಕಟಣೆಗೊಳ್ಳುತ್ತಿದ್ದು ಇಂದಿನಿಂದ ವೆಬ್ಸೈಟ್ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈಗಾಗಲೇ ಪತ್ರಿಕೆಯಲ್ಲಿ ಪ್ರಕಟಣೆಗೊಂಡ ಲೇಖನಗಳನ್ನು ಒಂದೆಡೆ ಸೇರಿಸಲಾಗಿದ್ದು ಆಸಕ್ತಿಯುಳ್ಳ ಓದುಗರಿಗೆ ಲೇಖನಗಳು ಸುಲಭವಾಗಿ ಲಭ್ಯವಾಗಲಿದೆ. ಉತ್ಸಾಹಿ ಬರಹಗಾರಿಂದ ಲೇಖನಗಳನ್ನು ಸಂಗ್ರಹಿಸಿ ಪ್ರಕಟ ಪಡಿಸಲು ಈ ದನಿ ವೆಬ್ಸೈಟ್ ವೇದಿಕೆಯು ಸಹಾಯಕವಾಗಲಿದೆ. ಈ ವೆಬ್ಸೈಟ್ ಬರಹಗಳು ಒಂದೇ ಧರ್ಮಕ್ಕೆ ಸಿಮೀತವಾದಂತೆ ಕಂಡರೂ ಮೂಲತಃ ವಿಶ್ವಪ್ರೇಮವನ್ನು ಸಾರುವುದೇ ಈ ದನಿ ವೆಬ್ಸೈಟ್ ಮೂಲ ಉದ್ದೇಶವಾಗಿದೆ.
ದನಿ ಮಾಧ್ಯಮ ಮನೆ