
ದೇವರನ್ನು ಸೇರಲು
ಸಾವಿರಾರು ಮಾರ್ಗಗಳಿವೆಯಂತೆ
ಆದರೆ ನಾನು ಆಯ್ಕೆ ಮಾಡಿಕೊಂಡಿದ್ದು
ಪ್ರೀತಿಯ ಮಾರ್ಗ
ಉರಿಯುವ ದೀಪಗಳಲ್ಲಿ ವ್ಯತ್ಯಾಸವಿದ್ದರೂ
ಅವು ನೀಡುವ ಬೆಳಕು ಮಾತ್ರ ಒಂದೇ..
ಬದಲಾಗು
ಆದರೆ ಬದಲಾಗುವ ಪ್ರಕ್ರಿಯೆ ಮಾತ್ರ
ನಿಧಾನವಾಗಿರಲಿ
ಏಕೆಂದರೆ ವೇಗಕ್ಕಿಂತ ಬದಲಾಗುವ
ಮಾರ್ಗ ಮುಖ್ಯ
ಮನಸ್ಸಿನ ಕಿಟಕಿಯ ತೆರೆದುಬಿಡು
ಹೊಸಗಾಳಿಯು ಬೀಸಿ
ಬೆಳಕು ಅದಕ್ಕೆ ಸೇರಿ
ಹೊಂಗಿರಣವಾಗಿಸಿ ಬಿಡುವುದು ಬದುಕನ್ನು
ಹೊಸ ಸಾಧ್ಯತೆಯ
ಕನವರಿಕೆಯಲಿ
ತಿಳಿದುಕೋ
ಈ ಲೋಕವು
ದಡ ಸೇರಿಸಲು ನೀನು ಎದುರಿಸುವ
ಅಲೆಗಳ ಬಗ್ಗೆ ಕೇಳುವುದಿಲ್ಲ
ಅದು ನಿನ್ನನ್ನು ಕೇಳುವುದಿಷ್ಟೆ;
ಹಡಗನ್ನು ದಡ ಸೇರಿಸಿದ್ಯಾ ? ಎಂದು.
ಕೋವಿ ಹಿಡಿದು ಹಕ್ಕಿಗೆ ಗುರಿಯಿಡಿಯುತ್ತಿದ್ದ
ಮನುಷ್ಯನಿಗೆ ಹಕ್ಕಿ ಹೇಳಿದ್ದು:
ನಿನ್ನ ಕೋವಿ ನಿನಗೆ ನನ್ನ ಸತ್ತ ದೇಹವನ್ನು
ಕೊಡಬಹುದಷ್ಟೆ, ನನ್ನನಲ್ಲ
ಜೀವಸೆಲೆ