ಕಂಧಮಾಲ್ ಹುತಾತ್ಮರಿಗೆ ಸಂತರ ಪದವಿ – ಪ್ರಕ್ರಿಯೆಗೆ ಅನುಮತಿ

Advertisements
Share

ಭಾರತದ ಕಂಧಮಾಲ್‍ನಲ್ಲಿ 2008ರಲ್ಲಿ ನಡೆದ ಕ್ರೈಸ್ತ ವಿರೋಧಿ ಹಿಂಸಾಚಾರದ ಸಂದರ್ಭದಲ್ಲಿ  ಕ್ರಿಸ್ತನಲ್ಲಿ ತಮ್ಮ ವಿಶ್ವಾಸಕ್ಕಾಗಿ ಹುತಾತ್ಮರಾದ 35 ಜನರಿಗೆ ಸಂತರ ಪದವಿಯನ್ನು ದೊರಕಿಸಿಕೊಡುವ ಪ್ರಾರಂಭಿಕ ಪ್ರಕ್ರಿಯೆಯನ್ನು ಆರಂಭಿಸಲು ವ್ಯಾಟಿಕನ್ ಅನುಮತಿ ನೀಡಿದೆ. ಆರ್ಚ್‍ಬಿಷಪ್ ಬರ್ವಾ ಅವರ ಈ ಪ್ರಸ್ತಾವನೆಯನ್ನು ಜನವರಿ 24-30 ರಂದು ಬೆಂಗಳೂರಿನಲ್ಲಿ ನಡೆದ ಭಾರತದ ಕ್ಯಾಥೋಲಿಕ ಬಿಷಪ್‍ಗಳ ಸಮ್ಮೇಳನವು ವ್ಯಾಟಿಕನ್‍ಗೆ ಅನುಮೋದಿಸಿ‌ ಶಿಫಾರಸು ಮಾಡಿತು. ವ್ಯಾಟಿಕನ್ ನೀಡಿದ ಅನುಮತಿಗೆ ಪ್ರತಿಕ್ರಿಯಿಸುತ್ತಾ “ಕಲ್ವಾರಿಯಲ್ಲಿ ಯೇಸುವನ್ನು ಅನುಸರಿಸಿದ ಸರಳ ಗ್ರಾಮಸ್ಥರಿಗೆ ಇದು ನಿಜಕ್ಕೂ ಒಂದು ದೊಡ್ಡ ಗೌರವವಾಗಿದೆ” ಎಂದು ಕಂಧಮಾಲ್ ಬದುಕುಳಿದವರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಫಾದರ್ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

ತನ್ನ ತಂದೆ ಮತ್ತು ಇತರರನ್ನು ಸಂತರ ಪದವಿಗೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುಮತಿ ನೀಡಿದ ವ್ಯಾಟಿಕನ್‌ಗೆ ಧನ್ಯವಾದ ಅರ್ಪಿಸುತ್ತಾ ರಾಜೇಂದ್ರ ದಿಗಲ್‍ರವರು “ನನ್ನ ತಂದೆ ಕ್ರಿಸ್ತನ ಮೇಲಿನ ವಿಶ್ವಾಸಕ್ಕಾಗಿ ಮರಣಹೊಂದಿದ್ದು ನನಗೆ ಹೆಮ್ಮೆಯ ಕ್ಷಣವಾಗಿದೆ. ಅವರು ಇಡೀ ಜಗತ್ತಿಗೆ ದೇವರಲ್ಲಿ ದೃಢವಾದ ವಿಶ್ವಾಸಕ್ಕೆ ನಿಜವಾದ ಸಾಕ್ಷಿಯಾಗಿದ್ದಾರೆ, ”ಎಂದು ಹೇಳಿದ್ದಾರೆ.

ಫಾದರ್ ಬರ್ನಾರ್ಡ್ ಡಿಗಲ್, ಜುಬೋರಾಜ್ ದಿಗಲ್, ಸಿಬಿನೋ ಪ್ರಧಾನ್, ರಘಪತಿ ದಿಗಲ್, ಕಂಠೇಶ್ವರ ದಿಗಲ್, ಬಿಕ್ರಮ್ ನಾಯಕ್, ರಾಜೇಶ್ ದಿಗಲ್, ತ್ರಿನಾಥ್ ದಿಗಲ್, ಪರಿಖಿತಾ ನಾಯಕ್, ಸುಚಿತ್ರಾ ದಿಗಲ್, ಲೆನ್ಸಾ ಡಿಗಲ್, ಸುಬೇದನಾ ನಾಯಕ್, ಮಾಯಾಗಿನಿ ದಿಗಲ್, ಜುನಿಮಾ ಪರಿಚಾ, ಬಾಸ್ಟಿನಾ ಮಾಂಟ್ರಿ, ಪ್ರಿಯಾ ದರ್ಶನಿ ನಾಯಕ್, ಡಸ್ಟಿನಾ ಪರಿಚಾ, ಸಿರೆಲ್ ಪರಿಚಾ, ಭೂಮಿಕಾ ದಿಗಲ್, ತೇಪನ್ ನಾಯಕ್, ಬದನಿ ದಿಗಲ್, ದಿಗಂಬರ್ ದಿಗಲ್, ಲಲಿತಾ ದಿಗಲ್, ಆಗಸ್ಟೀನ್ ಡಿಗಲ್, ತಿಲೇಶ್ವರ್ ಪಲ್ಟಾಸಿಂಗ್, ಕುಂದನ್ ಮಾಂಟ್ರಿ, ಹೇಮಂತ್ ದಿಗಲ್, ಬಿಭೀಸನ ದಿಗಲ್, ರೆಬೋಟಿ ಪರಿಚಾ, ಮೆಲಾನಿಯೊ ಡಿಗಲ್, ಕೃಷ್ಣ ನಾಯಕ್, ಜಮಾದೇ ಪ್ರಧಾನ್, ಬಲಿಯರ್ಸಿಂಗ್ ದಿಗಲ್, ಗೊಂಡ ದಿಗಲ್, ಮೇರಿ ಪಾನಿ ಹೀಗೆ 35 ಹುತಾತ್ಮರಲ್ಲಿ 24 ಪುರುಷರು ಮತ್ತು 11 ಮಹಿಳೆಯರು ಇದ್ದಾರೆ.

ಕೃಪೆ: ಮ್ಯಾಟರ್ಸ್ ಇಂಡಿಯಾ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram