
ಒಂದು ಚಂಡಮಾರುತ ಬಂದು ನಿಂತಿತ್ತು. ಜೆನ್ ಗುರು ರ್ಯೊಕೆನ್ ಸಮುದ್ರ ತೀರದಲ್ಲಿ ನಡೆದು ಹೋಗುತ್ತಿದ್ದ. ಚಂಡಮಾರುತಕ್ಕೆ ಸಿಕ್ಕಿದ ಸ್ಟಾರ್ಫಿಶ್ಗಳು ದಡಕ್ಕೆ ಬಂದು ಬಿದ್ದು ಮರಳಿ ಹೋಗಲಾಗದೆ ಒದ್ದಾಡುತ್ತಾ ಇದ್ದವು. ರ್ಯೊಕೆನ್ ಒಂದೊಂದನ್ನೇ ಹೆಕ್ಕಿ ಮರಳಿ ನೀರಿಗೆ ಬಿಟ್ಟು ಅವುಗಳನ್ನು ಬದುಕಿಸುತ್ತಿದ್ದ. ಅದನ್ನು ನೋಡಿದ ಒಬ್ಬ ವ್ಯಕ್ತಿ ಕೇಳಿದ- ”ಗುರುಗಳೆ, ಪ್ರತಿ ಸಲ ಚಂಡಮಾರುತ ಬಂದಾಗಲೂ ಇದೇ ರೀತಿ ಸಾವಿರಾರು ಸ್ಟಾರ್ಫಿಶ್ಗಳು ಬಂದು ದಡಕ್ಕೆ ಬಿದ್ದು ಸಾಯುತ್ತವೆ. ನೀವು ಎಷ್ಟಂತ ಬದುಕಿಸಲು ಸಾಧ್ಯ? ನಿಮ್ಮ ಕೆಲಸ ವ್ಯರ್ಥವಲ್ಲವೇ? ಇದು ಏನು ಬದಲಾವಣೆ ಮಾಡುತ್ತದೆ?” ರ್ಯೊಕೆನ್ ಒಂದು ಸ್ಟಾರ್ಫಿಶ್ನ್ನು ನೀರಿಗೆ ಬಿಡುತ್ತಾ ಉತ್ತರಿಸಿದರು- ”ಇರಬಹುದು. ಆದರೆ ಈ ಮೀನಿಗಂತೂ ಇದು ಸಾವು- ಬದುಕಿನ ಬದಲಾವಣೆ!”
ನಮ್ಮ ಒಂದು ಪುಟ್ಟ ವರ್ತನೆಯೂ ಇನ್ನೊಬ್ಬರ ಬದುಕಿನ ಮಹತ್ವದ ಘಟನೆ ಆಗಿರಬಹುದು.
ಸಂಗ್ರಹ – ಅನು