ಒಂದ್ಚೂರು ಹೀಗೂ ಯೋಚ್ನೆ ಮಾಡಿ!

Advertisements
Share

 

ಹೆಮ್ಲಕ್ ವಿಷ ಸೇವಿಸಿ ಸಾವಿಗೀಡಾಗಬೇಕಿದ್ದ ಸಾಕ್ರೆಟಸ್
ಹಿಂದಿನ ರಾತ್ರಿ ಪುಸ್ತಕವೊಂದನ್ನು ಓದುತ್ತಿದ್ದುದ್ದನ್ನು ಕಂಡ ಸೆರೆಮನೆಯ ಕಾವಲುಗಾರ ಕೇಳಿದ್ನಂತೆ, ಹೇಗೋ ಬೆಳಗ್ಗೆ ಸಾಯ್ತೀಯ, ಯಾಕ್ತಾನೆ ಈಗ ಪುಸ್ತಕ ಓದ್ತಿದ್ದಿಯಾ? ಸಾಕ್ರೆಟಿಸ್ ಈ ತಾತ್ವಿಕ ಉತ್ತರ ಕೊಡ್ತಾನೆ, ನಾಳೆ ನಾನು ಸಾಯ್ವಾಗ ಇನ್ನೂ ಹೆಚ್ಚಿನ ಬುದ್ಧಿವಂತನಾಗಿರ್‍ತೀನಿ.

ಇನ್ನೂ ಹೆಚ್ಚಾಗಿ ಸಾಧಿಸ್ತೀನಿ, ಅನ್ನೋ ಒಂದೇ ಒಂದು ಯೋಚನೆ ಒಬ್ಬ ವ್ಯಕ್ತಿಯ ಇಡೀ ಬದುಕನ್ನೇ ಬದಲಾಯಿಸಿಬಿಡುತ್ತೆ. ಪ್ರತಿ ದಿನ ನಾನು ಒಂದ್ಚೂರು ಜಾಸ್ತಿ ಓದಿದ್ರೆ, ಒಂದಿಷ್ಟು ಜಾಸ್ತಿ ಕಲ್ತ್ರೆ, ಸ್ವಲ್ಪ ಜಾಸ್ತಿ ನಡೆದ್ರೆ ಸ್ವಲ್ಪ ಹೆಚ್ಚಿನ ವ್ಯಾಯಾಮ ಮಾಡಿದ್ರೆ ಉನ್ನತೀಕರಣದತ್ತ ನಮ್ಮ ಬದುಕು ಸಾಗ್ತಿರೋದನ್ನ ನಾವಾಗಿಯೇ ಕಾಣ್ಬಹುದು. ಪ್ರತಿ ದಿನ ಒಂದಂಶ ಜಾಸ್ತಿ ಸಾಧಿಸಿದ್ರೆ, ನೂರು ದಿನಕ್ಕೆ ಅದು ನೂರಂಶವಾಗಿ ಮಾರ್ಪಡುತ್ತೆ. ಸಾಧಕರೆಲ್ಲರಿಗೂ ತಮ್ಮ ಸಾಧನೆಯ ಕ್ಷೇತ್ರದಲ್ಲಿ ಕಾಲಿಟ್ಟ ಮೊದಲ ದಿನ, ಮೊದಲ ಕ್ಷಣ ಇದ್ದೇ ಇರುತ್ತೆ. ಆ ಮೊದಲ ಆರಂಭ ಒಂದು ಸಾಧನೆವರೆಗೂ ಆ ವ್ಯಕ್ತಿಯನ್ನು ಕರೆದೊಯ್ದದ್ದು ಯಾವುದೇ ಜಾದೂ ಅಲ್ಲ, ಅದರ ಹಿಂದಿನ ಶ್ರಮ.
achieved through efforts ಅನ್ನೋ ಮಾತು ಎಷ್ಟೊಂದು ಸತ್ಯ ಅಲ್ವಾ?

ನೆನ್ನೆ ತರ ಇವತ್ತಿದ್ರೆ, ಇವತ್ತಿನ ತರ ನಾಳೆ ಇರ್‍ತೀನಿ ಅಷ್ಟೆ. ಹಾಗಿರ್‍ಬಾರ್‍ದೂ ಅಂದ್ರೆ ನೆನ್ನೆಗಿಂತ ಇವತ್ತು, ಇವತ್ತಿಗಿಂತ ನಾಳೆ ಜಾಸ್ತಿ ಕಲೀಬೇಕು, ದುಡೀಬೇಕು, ಸಾಧನೆಯತ್ತ ಸಾಗ್ಬೇಕು. ಇಲ್ಲ ಅಂದ್ರೆ ನಾವು ಹೀಗೇ ಇದ್ದುಬಿಡ್ತೀವಿ. ಎಲ್ಲಿರ್‍ತಿವೋ ಅಲ್ಲೇ ಉಳ್ದುಬಿಡ್ತೀವಿ. ಒಂದ್ಚೂರು ಯೋಚ್ನೇ ಮಾಡಿ, ನಮ್ಮ ಬದುಕು ನಿಂತ ನೀರಾಗಬಾರದು, ಅದು ಯಾವತ್ತೂ ಹರಿಯೋ ನದಿ ತರ ಇರ್‍ಬೇಕು. ಆರಂಭ ಇಂದೇ ಆಗಲಿ. ಆಲ್ ದ ಬೆಸ್ಟ್!

ಆನಂದ್ ಎಸ್.ಡಿ.ಬಿ.
ಬೆಂಗಳೂರು

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram