ಮಾತನಾಡು ಕವಿತೆಯೇ. . ಮಾತನಾಡು…

Advertisements
Share

 ಕವಿತೆಯೇ
ಮುನಿಸಿಕೊಂಡಿರುವೆ ಏಕೆ?
ಹೇಳಲು ನೂರೆಂಟಿರಲುಮುನಿಸು ಏಕೆ?
ಸಾಕಿನ್ನು ಮುನಿಸು
ಹೇಳಬೇಕಾಗಿರುವುದ ಹೇಳದೆ
ಮುನಿಸಿಕೊಂಡರೆ
ದುಷ್ಟನ ಮುಖದಲ್ಲಿ ಗೆದ್ದ ನಗು ಬೀರಿ
ಕೊಲ್ಲುವನ ಕೈಗಳಿಗೆ ಅಧಿಕಾರ ಸೇರಿ
ಸುಳ್ಳು ಬಾಯಲಿ ಮಂತ್ರಗಳು ಮೂಡಿ
ಕತ್ತಲು ಬೆಳಕಾ ನುಂಗಿಬಿಟ್ಟು
ಜಗವೇ ಕತ್ತಾಲಾಗಿಬಿಡುವುದು
ಮಾತನಾಡು ಕವಿತೆಯೇ. . ಮಾತನಾಡು
ನಿನ್ನದು ಮಾತಲ್ಲ
ಮಾತಿನಲ್ಲಿರುವ ಜೀವಕಣ
ನಿನ್ನದು ಪದಗಳಲ್ಲ
ಪದಗಳಲ್ಲಿರುವ ಪ್ರೀತಿಯ ಕಾವು
ನಿನ್ನದು ಉಪಮೆಗಳಲ್ಲ
ಉಪಮೆಗಳಲ್ಲಿರುವ ಕೂಡುವ ಭಾವನಿನ್ನದು ದನಿಯಲ್ಲ
ದನಿಯಲ್ಲಿರುವ ಹೋರಾಟದ ಕಿಚ್ಚು
ನಿನ್ನದು ರೂಪವಲ್ಲ
ರೂಪದಲ್ಲಿರುವ ಕುರೂಪದ ಬಗೆಗಿನ ನಿಟ್ಟುಸಿರು
ನಿನ್ನದು ಪ್ರಾಸವಲ್ಲ
ಪ್ರಾಸದಲ್ಲಿರುವ ಸತ್ಯದ ಆಳದ ತಳಮಳ
ಮಾತನಾಡು ಕವಿತೆಯೇ ಮಾತನಾಡು
ನೀನು ಮಾತಾಡದಿದ್ದರೆ
ಜಗವೇ ಕತ್ತಲಾಗಿಬಿಡುವುದು’
ಮಾತನಾಡು ಕವಿತೆಯೇ. . ಮಾತನಾಡು…

ಜೀವಸೆಲೆ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram