
ತಲೆ ಬಿಟ್ಟು ಹೋಗಬೇಡಿ
ಮುಲ್ಲಾ ಯಾವುದೋ ಧರ್ಮಕಾರ್ಯಕ್ಕೆಂದು ಹಣ ವಸೂಲು ಮಾಡುತ್ತಿದ್ದ, ಒಂದು ದಿನ ಒಬ್ಬ ಶ್ರೀಮಂತನ ಮನೆಗೆ ಬಂದು, ಮುಲ್ಲಾ ನಿಧಿ ವಸೂಲಿಗೆ ಬಂದಿದ್ದಾನೆ. ಎಂದು ತಿಳಿಸಿ ನಿಮ್ಮ ಯಜಮಾನರನ್ನು ಬರಹೇಳು ಎಂದು ಮನೆ ಆಳಿಗೆ ಹೇಳಿದ.
ಮನೆಯಾಳು ಮನೆಯೊಳಗೆ ಹೋಗಿ ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗಿ ಬಂದು ಮುಲ್ಲಾನಿಗೆ, ಸ್ವಾಮಿ, ಯಜಮಾನರು ಮನೇಲಿಲ್ಲ, ಎಲ್ಲೊ ಹೊರಗೆ ಹೋಗಿದ್ದಾರೆ” ಎಂದು ಭಿನ್ನವಿಸಿ
ಮುಲ್ಲಾ ಗಡ್ಡ ನೀವಿಕೊಳ್ಳುತ್ತಾ, ಸರಿ, ನಾನು ಈಗ ಹೇಳುವ ವಿಷಯವನ್ನು ನಿನ್ನ ಯಜಮಾನರು ಮನೆಗೆ ಬಂದೊಡನೆ ಹೇಳು. ಇನ್ನು ಮೇಲೆ ನಿನ್ನ ಮನೆಯಜಮಾನರು ಹೊರಗೆ ಹೋಗಬೇಕಾದರೆ ತಮ್ಮ ತಲೆಯನ್ನು ಎತ್ತಿಕೊಂಡು ಹೋಗಲು ಹೇಳು. ಏಕೆಂದರೆ ನಾನು ಬರುವಾಗ ಅವರ ತಲೆಯನ್ನು ಮೇಲೆ ಕಿಟಕಿ ಪಕ್ಕದಲ್ಲಿ ನೋಡಿದೆ. ಅವರು ತಮ್ಮ ತಲೆಯನ್ನು ಅಲ್ಲಿಯೇ ಬಿಟ್ಟು ಹೊರಗೆ ಹೋಗಿಬಿಟ್ಟಿದ್ದಾರಲ್ಲ ಎಂದು ಹೇಳಿ ಹೊರಟುಹೋದ.
ಸಂಗ್ರಹ – ಅನು